ಸೂರ್ಲು ಶ್ರೀ ಗಣೇಶ ಭಜನಾ ಮಂದಿರ ನವೀಕರಣ ಸಮಿತಿಗೆ ಚಾಲನೆ


ಕಾಸರಗೋಡು: ಸೂರ್ಲುಗಣೇಶ ಭಜನಾ ಮಂದಿರದ ಸ್ವರ್ಣ ಪ್ರಶ್ನೆಯಲ್ಲಿ ಕಂಡುಬಂದ ರೀತಿಯಲ್ಲಿ ಮಂದಿರವನ್ನು ಸಂಪೂರ್ಣವಾಗಿ  ನವೀಕರಿಸಲು 12.7.2026 ನೆಯ ಆದಿತ್ಯವಾರದಂದು ಮಂದಿರದಲ್ಲಿ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಯಿತು. ನವೀಕರಣ ಸಮಿತಿ ರೂಪೀಕರಣ ಸಭೆಯನ್ನು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು  ಅ ಸ್ರಾ  ದೀಪ ಬೆಳಗಿಸಿ ಉದ್ಘಾಟಿಸಿದರು.ಮಂದಿರದ ಅಧ್ಯಕ್ಷರಾದ ಶ್ರೀ ಸೀತಾರಾಮ ಕೆ ಅಧ್ಯಕ್ಷತೆ ವಹಿಸಿದರು. ಶ್ರೀ ರಾಮಣ್ಣ ಟೈಲರ್, ಶ್ರೀ ಉಮೇಶ ಶೆಟ್ಟಿ, ಶ್ರೀ ವಸಂತಕುಮಾರ್ ಉಪಸ್ಥಿತರಿದ್ದರು.ಶ್ರೀ  ಶಂಕರ ಬೆಳ್ಳಿಗೆ ಪ್ರಸ್ತಾವಿಕ ಭಾಷಣ ಮಾಡಿದರು. ಶ್ರೀ ಕೆ ಸುರೇಶ್ ಸೂರ್ಲು,ಕೃಷ್ಣಪ್ರಸಾದ್ ಕೋಟೆಕಣಿ, ಶ್ರೀ  ನಿರಂಜನ ಮಂಗಳೂರು,ಶ್ರೀ ರಾಮಕೃಷ್ಣ ಕೆ ಎಸ್,ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಆರಂಭದಲ್ಲಿ 

 ಶ್ರೀ ರಘುರಾಮ ಕೆ ಸ್ವಾಗತಿಸಿದರು. ಶ್ರೀ ಎಂ.ಅಶೋಕ ರೈ ಸೂರ್ಲು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾಬಲ ರೈ ಸೂರ್ಲು ವಂದಿಸಿದರು.ನವೀಕರಣ ಸಮಿತಿಗೆ

ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತ್ರ (asra) ರಕ್ಷಾ ಧಿಕಾರಿಗಳು 

ಶ್ರೀ ವಸಂತ ಪೈ ಬದಿಯಡ್ಕ (ಗೌರವ ಅಧ್ಯಕ್ಷರು)

ಶ್ರೀ ಸುರೇಶ್ ಕೆ ಸೂರ್ಲು (ಅಧ್ಯಕ್ಷರು )

ಶ್ರೀ ಕೃಷ್ಣ ಪ್ರಸಾದ್ ಕೋಟೆಕಣಿ: (ಪ್ರದಾನ ಕಾರ್ಯದರ್ಶಿ)

ಶ್ರೀ ಅಶೋಕ ರೈ ಸೂರ್ಲು : (ಕೋಶಾಧಿಕಾರಿ)   ಸೇರಿ 251 ಜನರನ್ನು ಒಳಗೊಂಡ ಸೂರ್ಲುಗಣೇಶ ಭಜನಾ ಮಂದಿರ ನವೀಕರಣ ಸಮಿತಿಯನ್ನು ರೂಪೀಕರಿಸಲಾಯಿತು.ನವೀಕರಣ ಸಮಿತಿ ರೂಪೀಕರಣದ ನಂತರ ಮಂದಿರದಲ್ಲಿ ಮೃತ್ಯುಂಜಯ ಹೋಮ ಮತ್ತು ಅನ್ನ ಸಂತರ್ಪಣೆ ನಡೆಯಿತು.500 ಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು