ಪೆರ್ಲ ಎಸ್.ಎನ್.ಎ.ಎಲ್.ಪಿ.ಶಾಲೆಯಲ್ಲಿ ವಾರ್ಷಿಕ ಮಹಾಸಭೆ; ರಕ್ಷಕ-ಶಿಕ್ಷಕ ಸಂಘ ಸಹಿತ ವಿವಿದ ಪದಾಧಿಕಾರಿಗಳ ಆಯ್ಕೆ


 ಪೆರ್ಲ:   ‌ಪೆರ್ಲ ಎಸ್ ಎನ್ ಎ ಎಲ್ ಪಿ ಶಾಲಾ 2026-27 ನೇ ಶೈಕ್ಷಣಿಕ ವರ್ಷದ ಮಹಾಸಭೆ ಜರುಗಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ರಾಜೇಶ್ ಬಜಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ವರದಿ ವಾಚಿಸಿದರು.  ಶ್ರೀಧರ ಭಟ್ ನಲ್ಕ ಅವರು ತರಗತಿ‌ ನಡೆಸಿದರು.

ನೂತನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ರೈ ಕುದ್ವ ಆಯ್ಕೆಗೊಂಡರು. ಮದರ್  ಪಿಟಿಎ ಅಧ್ಯಕ್ಷರಾಗಿ ಮಮತ ಪೆರ್ಲ, ಎನ್ ಎಂ ಪಿ ಅಧ್ಯಕ್ಷೆಯಾಗಿ ಕಲಾವತಿ ಪಳ್ಳಕಾನ, ಸ್ಪೋಟ್ಸ್ ಕೌನ್ಸಿಲ್ ಅಧ್ಯಕ್ಷರಾಗಿ ಗೋಪಾಲಕೃಷ್ಣ ಪಳ್ಳಕಾನ, ಪ್ರೊಗ್ರಾಂ ಸಮಿತಿ ಅಧ್ಯಕ್ಷೆಯಾಗಿ ದಿವ್ಯ ಪಿಲಿಂಗಲ್ಲು ಆಯ್ಕೆಗೊಂಡಿದ್ದಾರೆ. ನಬೀಸ ಕುದುಕೋಳಿ, ಶಂಕರ ಪೂಜಾರಿ ಖಂಡಿಗೆ, ಶಾರದಾ ಪಳ್ಳಕಾನ, ಅಕ್ಷತಾ ಬೋಳುಬೈಲ್, ಬಿಂದು ಬಣ್ಪುತ್ತಡ್ಕ,ಭವ್ಯ ಸೂರ್ಡೇಲು ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.ಶಿಕ್ಷಕಿ ಅಮೃತಾ ಸ್ವಾಗತಿಸಿ, ಶಿಕ್ಷಕಿ ಉಮಾಶಂಕರಿ ವಂದಿಸಿದರು.ಉದಯ ಸಾರಂಗ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು