ತಿರುವನಂತಪುರಂ: ರಾಜ್ಯದಲ್ಲಿ ಮತ್ತೆ ವಿದ್ಯುತ್ ಕಡಿತ (ನಿಯಂತ್ರಣ) ಜಾರಿಗೆ ಬರಲಿದೆ. ಜೂನ್ 30 ರವರೆಗೆ ವಿದ್ಯುತ್ ನಿಯಂತ್ರಣ ಇರಲಿದೆ ಎಂದು ಕೆ.ಎಸ್.ಇ.ಬಿ (KSEB) ತಿಳಿಸಿದೆ. ಸಂಜೆ 6 ರಿಂದ ರಾತ್ರಿ 12 ರ ಅವಧಿಯಲ್ಲಿ ಈ ನಿಯಂತ್ರಣ ಇರಲಿದೆ.
ವಿದ್ಯುತ್ ಲಭ್ಯತೆಯಲ್ಲಿ ತೀವ್ರ ಬಿಕ್ಕಟ್ಟು ಎದುರಾಗಿದೆ ಎಂಬುದು ಕೆ.ಎಸ್.ಇ.ಬಿ ವಾದವಾಗಿದೆ. ಮಳೆಯ ಕೊರತೆಯು ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ಕೆ.ಎಸ್.ಇ.ಬಿ ತಿಳಿಸಿದೆ. ಎಲ್ ನಿನೋ ವಿದ್ಯಮಾನ ಮುಂದುವರಿದಿರುವುದರಿಂದ ದೇಶಾದ್ಯಂತ ವಿದ್ಯುತ್ ಲಭ್ಯತೆಯಲ್ಲಿ ಕೊರತೆಯುಂಟಾಗಿದೆ. ಆಂತರಿಕ ಉತ್ಪಾದನೆಯು ಅದರ ಪೂರ್ಣ ಪ್ರಮಾಣದಲ್ಲಿ ಲಭ್ಯವಿದ್ದಾಗ್ಯೂ, ಪ್ರತಿದಿನ 900 ಮೆಗಾವ್ಯಾಟ್ ವಿದ್ಯುತ್ ಕೊರತೆಯಾಗುತ್ತಿದೆ ಎಂದು ಕೆ.ಎಸ್.ಇ.ಬಿ ಮಾಹಿತಿ ನೀಡಿದೆ.
Tags
ತಿರುವನಂತಪುರಂ
