ಕುಂಟಿಕಾನ ಶಾಲೆಯ ನೂತನ ವಾಹನ ಚಾಲನೆಗೆ ಹಸಿರು ನಿಶಾನೆ


 ಬದಿಯಡ್ಕ: ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯ ನೂತನ ವಾಹನ ವ್ಯವಸ್ಥೆಗೆ ಗುರುವಾರ ಬೆಳಗ್ಗೆ ಚಾಲನೆಯನ್ನು ನೀಡಲಾಯಿತು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ. ಅವರು ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ ಅವರಿಗೆ ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಕುಂಟಿಕಾನ ಶಾಲೆಯು ಪ್ರಗತಿಯನ್ನು ಸಾಧಿಸುತ್ತಾ ಮುಂದೆ ಬರುತ್ತಿದೆ. ಶಾಲೆಯ ಎಲ್ಲಾ ಚಟುವಟಿಕೆಗಳಲ್ಲೂ ಮಕ್ಕಳು ಪಾಲ್ಗೊಂಡಾಗ ಅವರ ವ್ಯಕ್ತಿತ್ವ ವಿಕಾಸವನ್ನು ಹೊಂದುತ್ತದೆ. ಅಧ್ಯಾಪಕರು, ಪಾಲಕರು, ಸಹಕರಿಸಿದರೆ ಮಾತ್ರ ಒಂದು ಶಾಲೆಯನ್ನು ಉನ್ನತಿಗೇರಿಸಲು ಸಾಧ್ಯ. ಶಾಲೆಯ ಉಪಯೋಗಕ್ಕಾಗಿ ವ್ಯವಸ್ಥಾಪಕರು ಖರೀದಿಸಿದ ನೂತನ ವಾಹನವು ಮಕ್ಕಳಿಗೆ ಅನುಕೂಲವಾಗಲಿ ಎಂದರು. ಗ್ರಾಮಪಂಚಾಯಿತಿ ಸದಸ್ಯರುಗಳಾದ ಅನ್ನತ್ ಬೀವಿ, ಶ್ಯಾಮಪ್ರಸಾದ ಸರಳಿ, ಮಾಜಿ ಉಪಾಧ್ಯಕ್ಷ ಅಬ್ಬಾಸ್, ಶಾಲಾ ಮುಖ್ಯೋಪಾಧ್ಯಾಯ ಪ್ರಶಾಂತ್ ಕುಮಾರ್ ಕೆ., ಅಧ್ಯಾಪಕರುಗಳಾದ ದಿನ ಕೆ., ಸುಭಾಶ್ ಇ.ಕೆ., ಶರತ್ ಕುಮಾರ್ ಎಂ., ಅಬ್ದುಲ್ ಸಲಾಂ, ನಿವೃತ್ತ ಅಧ್ಯಾಪಿಕೆ ಮುಕಾಂಬಿಕಾ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು