ಕಾಸರಗೋಡು: ಮನೆಯ ಟೆರೇಸ್ ಏರಿ ಮಾವಿನ ಮರದ ರೆಂಬೆ ಕತ್ತರಿಸುವ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಕಾಂಞಂಗಾಡ್, ಅತಿಞಾಲ್, ತೆಕ್ಕೆಪ್ಪುರಂನ ಕಮ್ಮಾಡತ್ ಹೌಸ್ ನಿವಾಸಿ ಕೆ.ಪಿ. ಅಬ್ದುಲ್ ಹಕೀಂ (57) ಮೃತಪಟ್ಟ ದುರ್ದೈವಿ.
ಶುಕ್ರವಾರ ಮುಂಜಾನೆ ಒಂದು ಗಂಟೆ ಸುಮಾರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಮಾರ್ಚ್ 24ರಂದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿತ್ತು. ಮನೆಯ ಮೇಲೆ ವಾಲಿ ನಿಂತಿದ್ದ ಮಾವಿನ ಮರದ ರೆಂಬೆಯನ್ನು ಕತ್ತರಿಸುತ್ತಿದ್ದಾಗ ಆಯತಪ್ಪಿ ಟೆರೇಸ್‌ನಿಂದ ಕೆಳಗೆ ಬಿದ್ದಿದ್ದರು.
ಮೃತರು ಪತ್ನಿ ಶಮ್ನತ್, ಮಕ್ಕಳಾದ ಹಾಶಿರ್, ಹಾಮಿಷ್, ಹಾತಿಮ್ ಮತ್ತು ಮುಹಮ್ಮದ್ ಅವರನ್ನು ಅಗಲಿದ್ದಾರೆ. ಸಹೋದರರು: ಮೊಯ್ದೀನ್ ಕುಂಞಿ, ಕುಞಮ್ಮದ್ ಸಲಾಂ, ಡಾ. ಅಬ್ದುಲ್ ರೆಹಮಾನ್ ಮತ್ತು ದಿವಂಗತ ಹಂಸ.
Tags
ಕಾಸರಗೋಡು
