ಕಾಸರಗೋಡು: ಶಾಲಾ ವಾಹನ ಚಾಲಕನ ಮೃತದೇಹ ಮನೆಯ ಏಣಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಯ್ನಾಚಿ, ಪರಂಬದ ದಿವಂಗತ ಕೃಷ್ಣನ್ ರವರ ಪುತ್ರ ಸಿ.ರವಿ(51) ಮೃತಪಟ್ಟವರು. ಇಂದು (ಮಂಗಳವಾರ) ಮನೆಯ ಹಿಂಬಾಗದಲ್ಲಿರುವ ಕಬ್ಬಿಣದ ಏಣಿಯಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆ ಮೃತಪಟ್ಟಿದ್ದರು. ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದರು.
ಮೃತರು ತಾಯಿ ಅಮ್ಮಿಣಿ, ಪತ್ನಿ ಪ್ರೇಮ, ಮಕ್ಕಳಾದ ಶರಣ್ ಕೃಷ್ಣ, ಶ್ರಾವಣ್ ಕೃಷ್ಣ, ಸಹೋದರಿಯರಾದ ಬೇಬಿ, ಲಲಿತ, ಮೀನಾಕ್ಷಿ ಎಂಬಿವರನ್ನು ಅಗಲಿದ್ದಾರೆ.
Tags
ಕಾಸರಗೋಡು
