ಕಾಸರಗೋಡು: ಬಾರಿಕಾಡ್ ಪುದಿಯಪುರ ತರವಾಡಿನಲ್ಲಿ ಶ್ರೀ ವಯನಾಟ್ಟು ಕುಲವನ್ ದೈವಂಕೆಟ್ಟು ಮಹೋತ್ಸವವು ಏಪ್ರಿಲ್ 23, 24, 25 ಮತ್ತು 26ರಂದು ನಡೆಯಲಿದೆ. ಉತ್ಸವದ ಅಂಗವಾಗಿ ನಡೆಯುವ ಕೂವಂ ಅಳಕ್ಕಲ್' (ಧಾನ್ಯ ಅಳೆಯುವ ಶಾಸ್ತ್ರ) ವಿಧಿಯು ತರವಾಡಿನಲ್ಲಿ ಜರುಗಿತು.
ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಪಾಡಿ ಶ್ರೀ ಪುಳ್ಳಿಕರಿಂಕಾಳಿ ಭಗವತಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಆಚಾರಸ್ಥಾನಿಕರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Tags
ಕಾಸರಗೋಡು
