ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ನಾಳೆ (ಮೇ.1 ಶುಕ್ರವಾರ) ಮಧ್ಯಾಹ್ನ 2 ಗಂಟೆಯಿಂದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದಗಳೊಂದಿಗೆ, ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವ ಸಂಸ್ಥಾನಮ್ ಒಡಿಯೂರು ಇವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿಯವರ ತಾಂತ್ರಿಕತ್ವದಲ್ಲಿ ಮಹಾ ಶ್ರೀಚಕ್ರ ನವಾವರಣ ಪೂಜೆ ಜರಗಲಿರುವುದು. ಅಪರಾಹ್ನ 2ರಿಂದ ನವಾವರಣ ಕೃತಿ ಆಲಾಪನೆ, ಯನ್.ಜೆ. ನಂದಿನಿ ಮತ್ತು ಬಳಗ, ವಯಲಿನ್‌ನಲ್ಲಿ ವಿದ್ವಾನ್ ವಿಠಲ ರಾಮಮೂರ್ತಿ ಚೆನೈ, ಮೃದಂಗದಲ್ಲಿ ಆನೂರು ಅನಂತಕೃಷ್ಣ ಶರ್ಮಾ ಬೆಂಗಳೂರು, ಮೋರ್ಸಿಂಗ್‌ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಜೊತೆಗೂಡಲಿದ್ದಾರೆ. ಸಂಜೆ 6ರಿಂದ ಅಷ್ಟಾವಧಾನ, ರಾತ್ರಿ 7.30ರಿಂದ ಮಹಾಪೂಜೆ ನಡೆಯಲಿದೆ.
Tags
ಬದಿಯಡ್ಕ
