ಕ್ಯಾಂಪ್ಕೊ ಸಂಸ್ಥೆಯ ಸಾಂತ್ವನ ಯೋಜನೆ; ಧನಸಹಾಯ ಹಸ್ತಾಂತರ


 ಪೆರ್ಲ: ಕ್ಯಾಂಪ್ಕೊ ಸಂಸ್ಥೆಯ  "ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಪೆರ್ಲ (ಬದಿಯಡ್ಕ) ಶಾಖೆಯ ಸಕ್ರಿಯ ಸದಸ್ಯರಾದ ಶ್ರೀ.ಧಾಮೋದರ ಮೂಲ್ಯ ಭಜಕೂಡ್ಲು  ಮನೆ, ಇವರ ತಾಯಿಯ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸಂಸ್ಥೆಯ ವತಿಯಿಂದ ನೀಡಲಾಗುವ ಸಹಾಯಧನದ ಮೊತ್ತ ₹ 50,000/- ರ ಚೆಕ್ ನ್ನು ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀ ವೆಂಕಟರಮಣ ಭಟ್ ಇವರು ಸದಸ್ಯರ ಮನೆಗೆ ತೆರಳಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ  ಶ್ರೀ ಚಂದ್ರ ಎಂ, ಪ್ರಾದೇಶಿಕ ವ್ಯವಸ್ಥಾಪಕರು, ಬದಿಯಡ್ಕ ಮತ್ತು ಶ್ಯಾಂ ಪ್ರಶಾಂತ ಬದಿಯಡ್ಕ ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು