ಬಾರಿಕ್ಕಾಡು ಪುದಿಯಪುರ ತರವಾಡಿನಲ್ಲಿ ದೈವಂಕಟ್ಟು ಮಹೋತ್ಸವ; ಕೂವಂ ಅಳಕಲ್ ಕಾರ್ಯಕ್ರಮ ನಾಳೆ


 ಕಾಸರಗೋಡು: ಬಾರಿಕ್ಕಾಡು ಪುದಿಯಪುರ ತರವಾಡಿನಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ  ಎಪ್ರಿಲ್ 23,24,25,26 ಎಂಬೀ ದಿನಗಳಲ್ಲಿ ಜರಗಲಿರುವುದು. ಕಾರ್ಯಕ್ರಮದ ಅಂಗವಾಗಿ ಕೂವಂ ಅಳಕಲ್ (ಭತ್ತ ಅಳೆಯುವ ಕಾರ್ಯಕ್ರಮ) ನಾಳೆ (ಎಪ್ರಿಲ್ 2 ಗುರುವಾರ) ಜರಗಲಿದೆ. ನಾಳೆ ಬೆಳಗ್ಗೆ 11 ರಿಂದ 11.21 ರ ಶುಭ ಮುಹೂರ್ತದಲ್ಲಿ ಭತ್ತ ಅಳೆಯುವ ಕಾರ್ಯಕ್ರಮ ನಡೆಯಲಿದೆ. ಪಾಡಿ ಪುಳ್ಳಿಕರಿಂಗಾಳಿ ಭಗವತಿ ಕ್ಷೇತ್ರ ಸಹಿತ ವಿವಿದ ಕ್ಷೇತ್ರಗಳ ಆಚಾರ ಸ್ಥಾನಿಕರು, ವಿವಿದ ಕ್ಷೇತ್ರಗಳ ಪದಾಧಿಕಾರಿಗಳು,  ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು