ಬಾವಿಗೆ ಬಿದ್ದ ಆಡನ್ನು ಮೇಲಕ್ಕೆತ್ತಲೆಂದು ಇಳಿದ ಇಬ್ಬರು ಉಸಿರುಗಟ್ಟಿ ಮೃತಪಟ್ಟ ಘಟನೆ ಮಲಪ್ಪುರಂ ಕೊಂಡೋಟ್ಟಿಯಲ್ಲಿ ನಡೆದಿದೆ. ಅನ್ಯ ರಾಜ್ಯ ಕಾರ್ಮಿಕರಾದ ಸಂತೋಷ್ ಬಾಧ್ಯ(32), ನರಸಿಂಹ ಪ್ರಧಾರ್(35) ಮೃತರು. ಇವರು ಒರಿಸ್ಸಾ ನಿವಾಸಿಗಳಾಗಿದ್ದು ಕಾಂಕ್ರೀಟು ಮಿಕ್ಸಿಂಗ್ ಕಾರ್ಮಿಕರಾಗಿದ್ದರು. ಕಂಪನಿಯ ಸನಿಹದಲ್ಲೇ ಇರುವ ಮನೆಯ ಆಡು ಬಾವಿಗೆ ಬಿದ್ದಿದ್ದು ಮಾಹಿತಿ ತಿಳಿದ ಇಬ್ಬರೂ ಬಾವಿಗಿಳಿದರು. ಮೇಲಕ್ಕೇರಲಾಗದೆ ಇಬ್ಬರೂ ಸಿಲುಕಿಕೊಂಡಿದ್ದು ಮಾಹಿತಿ ತಿಳಿದು ಆಗಮಿಸಿದ ಅಗ್ನಿಶಾಮಕ ದಳ ಇಬ್ಬರನ್ನು ಮೇಲಕ್ಕೆತ್ತಿದರೂ ಪ್ರಾಣ ಉಳಿಸಲಾಗಲಿಲ್ಲ. ನಿನ್ನೆ (ಸೋಮವಾರ) ಸಾಯಂಕಾಲ ಈ ಘಟನೆ ನಡೆದಿದೆ.
Tags
ಕೋಜಿಕ್ಕೋಡ್
