ಟಿಪ್ಪರ್ ಲಾರಿ ಚಾಲಕನ ಮೃತದೇಹ ರಸ್ತೆ ಬದಿಯಲ್ಲಿ ನಿಗೂಡ ಸ್ಥಿತಿಯಲ್ಲಿ ಪತ್ತೆ



 ಕಾಸರಗೋಡು: ಟಿಪ್ಪರ್ ಲಾರಿ ಚಾಲಕನಾದ ಯುವಕನ ಮೃತದೇಹ ರಸ್ತೆ ಬದಿಯಲ್ಲಿ ನಿಗೂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.‌ಮಡಿಕೈ ಗ್ರಾಮ‌ ಪಂಚಾಯತು ಮಾಜಿ ಉಪಾಧ್ಯಕ್ಷೆ ಕೋದೋಟ್ ಪರಂಬಿಲ್ ಪ್ರಮೀಳರ ಪುತ್ರ ಶ್ರೀರಾಜ್(28) ಮೃತಪಟ್ಟವರು. ಇಂದು (ಗುರುವಾರ) ಬೆಳಗ್ಗೆ ಕಾಞರಪೋಯಿಲ್ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇವರ ಮೊಬೈಲು ಫೋನ್ ಮನೆಯಲ್ಲಿ ಚಾರ್ಜು ಮಾಡಲು ಇಡಲಾಗಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದರು.‌ಫಾರೆನ್ಸಿಕ್ ವಿಭಾಗದ ಅಧಿಕಾರಿಗಳು ಆಗಮಿಸಿ ಮಾಹಿತಿ ಸಂಗ್ರಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು