ತೆರುವತ್ತ್ ಶ್ರೀ ಚೀರುಂಬಾ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಸೇವಾಭಾರತಿಗೆ ವೈದ್ಯಕೀಯ ಉಪಕರಣಗಳ ಹಸ್ತಾಂತರ


 ಕಾಸರಗೋಡು: ತೆರುವತ್ತ್ ಶ್ರೀ ಚೀರುಂಬಾ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರ ಆಡಳಿತ ಸಮಿತಿಯ ವತಿಯಿಂದ ಸೇವಾಭಾರತಿಗೆ ನೂತನ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಲಾಯಿತು. ಕೊಂಡೆಯೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಹಸ್ತದಿಂದ ರಾಷ್ಟ್ರೀಯ ಸೇವಾಭಾರತಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಶ್ರೀ ದಿನೇಶ್ ಎಂ.ಟಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸಂಗೀತಾ ವಿಜಯನ್ ಯವರು ಸ್ವೀಕರಿಸಿದರು. ಹಾಗೂ ಸೇವಾಭಾರತಿ ಜಿಲ್ಲಾ ಕೋಶಾಧಿಕಾರಿ ಶ್ರೀ ಮತಿ ಶೀಜಾ ಮುರಳೀಧರನ್, ಶ್ರೀ ಸುಜಿತ್ ಕುಮಾರ್ ಕೆ, ಶ್ರೀ ಉಮೇಶ್ , ಬ್ರಹ್ಮಕಲಶೋತ್ಸವದ ಜನರಲ್ ಕನ್ವೀನರ್ ಶ್ರೀ ಕಮಲಾಕ್ಷನ್ ಕೆ.ಎನ್, ಚೆಯರ್ ಮಾನ್ ಅಡ್ವ. ನಾರಾಯಣನ್ ವಡಕ್ಕೇವೀಡ್, ಬ್ರಹ್ಮಶ್ರೀ ವಿಷ್ಣುಪ್ರಕಾಶ್ ತಂತ್ರಿ, ಕ್ಷೇತ್ರ ಅಧ್ಯಕ್ಷ ಹರೀಶ್ ಕುಮಾರ್ ಕೆ.ಎಂ, ಮುಂತಾದವರು ಉಪಸ್ಥಿತರಿದ್ದರು. ದೇವಸ್ಥಾನಗಳ ಉತ್ಸವಗಳ ಪ್ರಯುಕ್ತ ಹಲವಾರು ಖರ್ಚುಗಳನ್ನು ಮಾಡುವ ಸಂದರ್ಭದಲ್ಲಿ ಅದರ ಒಂದಂಶವನ್ನು ಸೇವಾಕಾರ್ಯಗಳಿಗೆ ಮೀಸಲಿಡುವ ಕಾರ್ಯವು ಅತ್ಯಂತ ಶ್ಲಾಘನೀಯ ಹಾಗೂ ಮಾದರಿಯಾಗಬೇಕು ಎಂದು ಸೇವಾಭಾರತಿ ಜಿಲ್ಲಾಧ್ಯಕ್ಷರಾದ ಶ್ರೀ ದಿನೇಶ್ ಎಂ.ಟಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು