ಬದಿಯಡ್ಕ: ಕುಂಬ್ಡಾಜೆ-ಬೆಳಿಂಜ-ನಾಟಕಲ್ಲು ರಸ್ತೆಯ ದುರಸ್ತಿಗಾಗಿ 80 ಲಕ್ಷ ರೂ ಮಂಜೂರು ಮಾಡಲಾಗಿದೆಯೆಂದು ಜಿಲ್ಲಾ ಪಂಚಾಯತು ಸದಸ್ಯರಾದ ರಾಮಪ್ಪ ಮಂಜೇಶ್ವರ ಅವರು ತಿಳಿಸಿದ್ದಾರೆ. ಈ ಜಿಲ್ಲಾ ಪಂಚಾಯತು ರಸ್ತೆಯಲ್ಲಿ ವ್ಯಾಪಕ ಹೊಂಡಗಳು ತುಂಬಿದ್ದು ವಾಹನ ಸಂಚಾರವೇ ದುಸ್ತರವೆನಿಸಿತ್ತು. ರಸ್ತೆ ದುರಸ್ತಿಗೊಳಿಸುವಂತೆ ವಾಹನ ಚಾಲಕರು, ಸಾರ್ವಜನಿಕರು ಹಲವು ಬಾರಿ ಒತ್ತಾಯಪಡಿಸಿದ್ದರು. ಈ ಹಿನ್ನೆಲೆಯಲ್ಲಿ 80 ಲಕ್ಷ ರೂ ಮಂಜೂರು ಮಾಡಲಾಗಿದೆ ಎಂದವರು ಹೇಳಿದ್ದಾರೆ. ಬದಿಯಡ್ಕ ಗ್ರಾಮ ಪಂಚಾಯತು ವ್ಯಾಪ್ತಿಯ ಕನ್ನೆಪ್ಪಾಡಿ-ಮುಂಡಿತ್ತಡ್ಕ ರಸ್ತೆ ದುರಸ್ತಿಗೆ 50 ಲಕ್ಷ ರೂ, ಪೆರಡಾಲ ಸರಕಾರಿ ಹೈಸ್ಕೂಲಿಗೆ 10 ಲಕ್ಷ ರೂ. ಸಹ ಅನುದಾನ ಲಭಿಸಿದೆ.
Tags
ಕಾಸರಗೋಡು
