ಕಣ್ಣೂರು: ಹಿರಿಯ ಕಾಂಗ್ರೆಸ್ ನೇತಾರ, ಸಂಸದ ಕೆ.ಸುಧಾಕರನ್ ಪಕ್ಷ ತ್ಯಜಿಸಲು ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಕರೆ ಮಾಡಿರುವ ಸುಧಾಕರನ್, "ಗುಡ್ ಬೈ ಕೆ.ಸಿ" ಎಂದಿದ್ದಾರೆ. ಸುಧಾಕರನ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುವರೇ ಅತವಾ ಮಮತಾ ಬ್ಯಾನರ್ಜಿ ರೀತಿಯಲ್ಲಿ ಬೇರೆಯೇ ರಾಜಕೀಯ ಪಕ್ಷ ರೂಪೀಕರಿಸುವರೇ ಎಂದು ಕಾದು ನೋಡಬೇಕಷ್ಟೆ.
ಕಣ್ಣೂರು ಸಂಸದರಾಗಿರುವ ಕೆ.ಸುಧಾಕರನ್, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ ಪಕ್ಷ ಅವರಿಗೆ ಟಿಕೆಟ್ ನಿರಾಕರಿಸಿತ್ತು.
Tags
ಕಣ್ಣೂರು
