ನಿವೃತ್ತ ಪೊಲೀಸ್ ಅಧಿಕಾರಿ ಬೇಳ ಪ್ರಭಾಕರ ಪೊಲೀಸ್ ನಿಧನ


 ನೀರ್ಚಾಲು: ನಿವೃತ್ತ ಪೊಲೀಸ್ ಅಧಿಕಾರಿ, ಬೇಳ ನಿವಾಸಿ ಪ್ರಭಾಕರ ಪೊಲೀಸ್ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ಇದ್ದ ಅವರು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಶಾಂತಕುಮಾರಿ, ಮಕ್ಕಳಾದ ವಿನೋದ್ ರಾಜ್, ಶ್ವೇತಪ್ರಭ, ವಿವೇಕ್ ರಾಜ್,  ಅಳಿಯ ಪ್ರದೀಪ್ (ಎ.ಎಸ್.ಐ.ಕುಂಬಳೆ), ಸೊಸೆಯಂದಿರಾದ ರಮ್ಯ, ಅಕ್ಷತಾ,   ಸಹೋದರ ಸಹೋದರಿಯರಾದ ಜಯಕರ, ಸುಭಾಷ್, ನಾರಾಯಣ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದ ಅವರು ಬದಿಯಡ್ಕ, ಆದೂರು, ಮಂಜೇಶ್ವರ, ಕುಂಬಳೆ, ಕಾಸರಗೋಡು ಟೌನ್ ಸಹಿತ ವಿವಿದ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು

ಸಂತಾಪ
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ, ಪಂಚಾಯತು ಸದಸ್ಯ ಹರೀಶ್, ಬ್ಲಾಕ್ ಪಂಚಾಯತು ಸದಸ್ಯ ಮಹೇಶ ವಳಕುಂಜ ಸಹಿತ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು