ಬೆಳ್ಳೂರು:ಅತೀ ಹೆಚ್ಚು ಸಲ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಆಲಿಸಿದ ಎರಡು ಬೂತು ಅಧ್ಯಕ್ಷರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಭಿನಂದನೆ.
ಬೆಳ್ಳೂರು ಪಂಚಾಯತು ಹಳೆಯ ಬೂತ್ 94 (ಹೊಸ ಬೂತು 104) ಅಧ್ಯಕ್ಷ ಪುಳಿತ್ತಡಿ ನಿವಾಸಿ ಪ್ರದೀಪ್ ಕುಮಾರ್ ಅವರನ್ನು ಮತ್ತು ರಮೇಶ್ ಆಚಾರ್ಯ ಬೆಳ್ಳೂರು (ಹಳೆ ಬೂತ್ 91)G.H.S.Belluru 108(ಹೊಸ ಬೂತ್ ) ಇವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ನೇರವಾಗಿ ಅಭಿನಂದಿಸಿದ್ದಾರೆ.
ಭಾರತದ ಪ್ರಧಾನ ಮಂತ್ರಿಯ ಮನ್ ಕೀ ಬಾತ್ ಕಾರ್ಯಕ್ರಮವು ಹಳ್ಳಿ ಹಳ್ಳಿಗಳ ಸಾಧಾರಣ ನಾಗರಿಕರು ಕೂಡ ಮೆಚ್ಚಿದ್ದಾರೆ.ಹಲವು ವಿಷಯಗಳನ್ನು ಕೂಡ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಇದು ಸ್ಪಷ್ಟ ಉದಾಹರಣೆಯಾಗಿದೆ.
ಪ್ರತಿ ಬೂತ್ ಮಟ್ಟದ ಕಾರ್ಯ ಚಟುವಟಿಕೆಯನ್ನು ಕೂಡ ಮೋದಿ ಜೀ ಮೇಲ್ನೋಟವಿಟ್ಟು ಜನತೆಗೆ ಆತ್ಮವಿಶ್ವಾಸ ನೀಡಿ ಪ್ರೇರಣೆಯಾಗುವುದು ಉತ್ತಮ ಸೇವಾ ಪ್ರವರ್ತನೆ ಆಗಿದೆ.*
*ಮನ್ ಕೀ ಬಾತ್ ಕೇವಲ ಒಂದು ಕಾರ್ಯಕ್ರಮ ಅಲ್ಲ ಬದಲು ಸಾವಿರಾರು ಸಾಮಾನ್ಯ ಮಾಧ್ಯಮ ವರ್ಗದ ಜನತೆಗೂ ಕೂಡ ಇಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶಿಯಾಗಿ ಮೂಡಿಬಂದಿದೆ.*
*ವಿವಿಧ ರಾಜ್ಯದ ಕಾರ್ಮಿಕ ವಲಯ, ಕೃಷಿ ಜೀವನ, ಸಂಸ್ಕೃತಿ, ರೈತ ವರ್ಗದವರಿಗೂ ಕೂಡ ಉತ್ತಮ ಸಲಹೆ ಸೂಚನೆಯಾಗಿ ಪ್ರಯೋಜನವಾಗಿದೆ.*
*ಪ್ರತಿ ತಿಂಗಳು ನಡೆಯುವ ಮನ್ ಕೀ ಬಾತ್ ಕಾರ್ಯಕ್ರಮವನ್ನು ಬೂತ್ ಬೂತ್ ಮಟ್ಟದಲ್ಲಿ ಎಲ್ಲಾ ಜನತೆಯು ವೀಕ್ಷಣೆ ಮಾಡಿ ಉತ್ತಮ ಸಲಹೆಗಳನ್ನು ಪಡೆದುಕೊಳ್ಳಬೇಕು.
