ಕಾಸರಗೋಡು: ನಗರದ ಆಟೋ ಚಾಲಕ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ. ನಗರದ ಕೆ.ಎಸ್.ಆರ್.ಟಿ.ಸಿ ಡಿಪೋ ಬಳಿಯ ಕಿಂಗ್ ಕೋಬ್ರಾ ಆಟೋ ಸ್ಟಾಂಡ್ ಚಾಲಕ, ಸಕ್ರಿಯ ಬಿಎಂಎಸ್ ಕಾರ್ಯಕರ್ತ ಪಿ.ನಾಗೇಶ್(50) ಮೃತಪಟ್ಟ ವ್ಯಕ್ತಿ. ಮೃತರು 25 ವರ್ಷಗಳಿಂದ ಕಾಸರಗೋಡು ನಗರದಲ್ಲಿ ಆಟೋ ಚಾಲಕರಾಗಿದ್ದರು. ಇಂದು (ಶನಿವಾರ) ಮುಂಜಾನೆ ಅವರಿಗೆ ಹೃದಯಾಘಾತ ಉಂಟಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಆದೂರು ಪೊಲೀಸರು ಕೇಸು ದಾಖಲಿಸಿದರು. ಮೃತರು ಪತ್ನಿ ಮೋಹಿನಿ, ಮಕ್ಕಳಾದ ಆದ್ಯಶ್ರೀ, ಆರ್ಯಶ್ರೀ, ಸಹೋದರಿ ಈಶ್ವರಿ ಎಂಬಿವರನ್ನು ಅಗಲಿದ್ದಾರೆ..
ನಾಗೇಶ್ ಅವರ ಅಕಸ್ಮಿಕ ನಿಧನವು ಕಿಂಗ್ ಕೋಬ್ರಾ ಆಟೋ ಸ್ಟಾಂಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
Tags
ಕಾಸರಗೋಡು
