ತ್ರಿಶೂರ್: ಎಡರಂಗದ ಭದ್ರಕೋಟೆಯಾದ ನಾಟಿಕ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸಿ.ಸಿ.ಮುಕುಂದನ್ ಬಿಜೆಪಿ ಸೇರಿದ್ದಾರೆ. ಇಂದು (ಸೋಮವಾರ) ಮದ್ಯಾಹ್ನ ತ್ರಿಶೂರು ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ಆಗಮಿಸಿ ಪಕ್ಷದ ಸದಸ್ಯತ್ವ ಸ್ವೀಕರಿಸಿದರು.
ನಾಟಿಕ ವಿಧಾನಸಭಾ ಮಂಡಲದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುಕುಂದನ್ ಅವರೇ ಸ್ಪರ್ದಿಸುವ ಸಾಧ್ಯತೆಯಿದೆ. ಹಲವು ವರ್ಷಗಳ ಕಾಲ ಸಿಪಿಐ ಮುಖಂಡನಾಗಿದ್ದ ಮುಕುಂದನ್ ಪಕ್ಷ ತ್ಯಜಿಸಿ ಬಿಜೆಪಿ ಸೇರಿರುವುದು ಎಡರಂಗಕ್ಕೆ ದೊಡ್ಡ ಆಘಾತವಾಗಿದೆ.
Tags
ತ್ರಿಶೂರ್

