ಮಂಜೇಶ್ವರ: ತಲಪ್ಪಾಡಿಯಲ್ಲಿ ಸಮಾನಾಂತರ ಲಾಟರಿ ವ್ಯಾಪಾರದಲ್ಲಿ ನಿರತರಾಗಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಪಚ್ಚಂಬಳ ನಿವಾಸಿ ಕುಞಾಲಿ(61), ಕಣ್ವತೀರ್ಥ ನಿವಾಸಿ ಪ್ರದೀಪ್ (41) ಬಂಧಿತರು. ಮಂಜೇಶ್ವರ ಎಸ್.ಐ.ಕೆ.ಆರ್.ಉಮೇಶ್ ನೇತೃತ್ವದ ಪೊಲೀಸರು ಆರೋಪಗಳನ್ನು ಬಂಧಿಸಿದರು. ಇವರ ಕೈಯಿಂದ 30910 ರೂ.ವಶಪಡಿಸಲಾಗಿದೆ. ಆರೋಪಿಗಳ ಹೆಸರಲ್ಲಿ ಲಾಟರಿ ಆಕ್ಟ್ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ.
Tags
ಮಂಜೇಶ್ವರ
