ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂಡಂಗುಳಿ ಒಕ್ಕೂಟದ ವಾರ್ಷಿಕೋತ್ಸವ ಮತ್ತು ಭಜನಾ ಮಂಗಳೋತ್ಸವ


ಕಾಸರಗೋಡು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿಜಿಸ್ಟರ್ ಬಿ ಸಿ ಟ್ರಸ್ಟ್ ಕಾಸರಗೋಡು ತಾಲೂಕು, ಎಡನೀರು ವಲಯ ಇದರ

 ಕುಂಡಂಗುಳಿ ಕಾರ್ಯಕ್ಷೇತ್ರದ ಕುಂಡಂಗುಳಿ ಒಕ್ಕೂಟದ ವಾರ್ಷಿಕೋತ್ಸವ ಮತ್ತು ಭಜನಾ ಮಂಗಳೋತ್ಸವ ಕಾರ್ಯಕ್ರಮ ಇಂದು( 1/3/2026) ಸ್ಥಳೀಯ ವ್ಯಾಪಾರಿ ಭವನದಲ್ಲಿ ನಡೆಯಿತು, ಕಾರ್ಯಕ್ರಮದಲ್ಲಿ ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದರು ಕಾರ್ಯಕ್ರಮವನ್ನು ಶ್ರೀ ಚರಳಿಲ್ ರಾಘವನ್ ಗುರುಸ್ವಾಮಿ ಅವರು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ 2 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಎ ಬಾಬು ನಾಯಕ್ ಸರ್ ಅವರು ಭಾಗವಹಿಸಿ ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯು ಇಂದು ಎಲ್ಲಾ ಪಾಲುದಾರ ಬಂಧುಗಳಿಗೆ... ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕ ಸಹಾಯವನ್ನು ನೀಡುತ್ತಿದ್ದು .. ಅಭಿವೃದ್ಧಿಗೆ ಪೂರಕವಾಗಿದೆ ಸಂಘದ ಎಲ್ಲಾ ಸದಸ್ಯರು ಸಂಘದ ಶ್ರೇಣಿಯನ್ನು ಕಾಪಾಡಿಕೊಂಡು,S, ಗ್ರೇಡ್ ನಿರ್ವಹಣೆ ಮಾಡುವಂತೆ ಕರೆ ನೀಡಿದರು, ಅಲ್ಲದೆ ಕಾರ್ಯಕ್ರಮದಲ್ಲಿ ಭಕ್ತಿ ಭಜನೆ ಮತ್ತು ಮನುಷ್ಯನ ಜೀವನ ನಿರ್ವಹಣೆಯಲ್ಲಿ ಧಾರ್ಮಿಕ ನಂಬಿಕೆಗಳು ಬಹಳ ಮುಖ್ಯ ಪಾತ್ರವಹಿಸುತ್ತದೆ ಆಹಾರ ಸಂಸ್ಕಾರ ಮತ್ತು ನಮ್ಮ ದಿನನಿತ್ಯದ ಬದುಕಿಗೆ ಭಜನೆ ಉತ್ತಮ ದಾರಿಯಾಗಿದೆ ಎಂದು ವಾಗ್ಮಿ ಶ್ರೀ ರಾಜನ್ ಮುಳಿಯರ್ ರವರು ತಿಳಿಸಿದರು, ಕಾರ್ಯಕ್ರಮದಲ್ಲಿ ಕಾಸರಗೋಡು ತಾಲೂಕು ಯೋಜನಾಧಿಕಾರಿ ಶ್ರೀ ದಿನೇಶ್ ಅವರು ಸಂಘದ ಸದಸ್ಯರಿಗೆ ಮಾಹಿತಿ ಮಾರ್ಗದರ್ಶನ ನೀಡಿದರು, ಶ್ರೀ ರಾಧಾಕೃಷ್ಣ ಭಟ್, ಶ್ರೀಮತಿ ದ್ರಾಕ್ಷಾಯಿಣಿ  ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು,, ಕಾರ್ಯಕ್ರಮ ವನ್ನು ಅಶ್ವಥ್ ಹಾಗೂ ಹರೀಶ್ ಅವರು ನಿರೂಪಣೆ ಮಾಡಿ, ಸೇವಾಪ್ರತಿನಿಧಿ ನವೀನ ಕುಮಾರಿ ಸ್ವಾಗತಿಸಿದರು, ವಿವಿಧ ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮ ಮತ್ತು ಸಂಸ್ಕೃತಿ ಕ ಕಾರ್ಯಕ್ರಮ ನೆರವೇರಿಸಲಾಯಿತು, 🙏

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು