ಕೇರಳವನ್ನು ಆರ್ಥಿಕ ಶಕ್ತಿಯನ್ನಾಗಿಸಲಿರುವ ಕೇಂದ್ರ ಬಜೆಟ್- ಬಿಜೆಪಿ ನೇತಾರ ಕೆ.ಸುರೇಂದ್ರನ್


ಕಾಸರಗೋಡು: ಕೇಂದ್ರ ಬಜೆಟಿನಲ್ಲಿ ಅಳವಡಿಸಿರುವ ದಾತು ಸಂಬಂಧ ಹಾಗೂ ತೆಂಗು ಉತ್ಪಾದನಾ ಸಂಬಂಧ ಯೋಜನೆಗಳು ಕೇರಳವನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಮಾಡಲಿದೆಯೆಂದು ಬಿಜೆಪಿ ನೇತಾರ ಕೆ.ಸುರೇಂದ್ರನ್ ಹೇಳಿದರು. ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಕೇಂದ್ರ ಬಜೆಟ್ ಬಗ್ಗೆ ಮಾತನಾಡುತ್ತಾ ಈ ರೀತಿ ಹೇಳಿದರು.   ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನ ಎಂ.ಎಲ್ ಅಧ್ಯಕ್ಷತೆ ವಹಿಸಿದರು.

    ಪಕ್ಷದ ಕೋಜಿಕ್ಕೋಡ್ ವಲಯ ಅಧ್ಯಕ್ಷ ಅಡ್ವ.ಕೆ.ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯರುಗಳಾದ ವಿ.ರವೀಂದ್ರನ್, ಸವಿತ ಟೀಚರ್, ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನಿಲ್, ಎನ್.ಬಾಬುರಾಜ್,  ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ ಡಿ, ಮಧೂರು ಗ್ರಾಮ ಪಂಚಾಯತು ಅಧ್ಯಕ್ಷೆ ಸುಜ್ಞಾನಿ ಶಾನುಬೋಗ್ ಮೊದಲಾದವರು ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು