ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಮರದ ರೆಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೆಲ್ಲಿಕುನ್ನು ಚೀರುಂಬಾ ರಸ್ತೆಯ ದಿವಂಗತ ಕುಮಾರನ್ ರವರ ಪುತ್ರ ರತೀಷ್(39) ಮೃತಪಟ್ಟ ಯುವಕ. ಇಂಟೀರಿಯಲ್ ಡೆಕರೇಶನ್ ಕೆಲಸ ಮಾಡುತ್ತಿದ್ದ ರತೀಷ್ ನಿನ್ನೆ (ಸೋಮವಾರ) ಮದ್ಯಾಹ್ನ ನಂತರ ನಾಪತ್ತೆಯಾಗಿದ್ದರು. ಗೆಳೆಯರು ಹಾಗೂ ಸಂಬಂಧಿಕರ ಹುಡುಕಾಡುತ್ತಿರುವಂತೆಯೇ ಇಂದು ಬೆಳಗ್ಗೆ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗರ ಠಾಣಾ ಪೊಲೀಸರು ಕೇಸು ದಾಖಲಿಸಿದರು. ಮೃತರು ತಾಯಿ ಸುಗಂಧಿ, ಪರ್ನಿ ಅಂಜು, ಪುತ್ರ ಆರವ್, ಸಹೋದರ ಸಹೋದರಿಯರಾದ ರಾಜೇಶ್, ರಮೇಶ್, ರಾಕೇಶ್, ಸಿಂಧು, ಬಿಂದು ಎಂಬಿವರನ್ನು ಅಗಲಿದ್ದಾರೆ.
Tags
ಕಾಸರಗೋಡು
