ಮುಳಿಯಾರು: ಮುಳಿಯಾರು ಪೊವ್ವಲ್ ಜನವಾಸ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉಪದ್ರವಕಾರಿಯಾಗಿದ್ದ ಕಾಡು ಹಂದಿಯನ್ನು ಸೀನಿಯರ್ ಶೂಟರ್ ಬಿ.ಅಬ್ದುಲ್ ಗಫೂರ್ ನೇತೃತ್ವದ ಪ್ರತ್ಯೇಕ ತಂಡ ಗುಂಡಿಟ್ಟು ಕೊಂದಿದೆ. ಮಾಹಿತಿ ತಿಳಿದ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಬಿ.ಮುಹಮ್ಮದ್ ಕುಞ, ರೇಂಜ್ ಫಾರೆಸ್ಟ್ ಆಫೀಸರ್ ಸಿ.ವಿ.ವಿನೋದ್‌ಕುಮಾರ್, ಗ್ರಾಮ ಪಂಚಾಯತು ಸದಸ್ಯೆ ಆಯಿಷ, ಸೆಕ್ಷನ್ ಫಾರೆಸ್ಟ್ ಆಫೀಸರ್ ಕೆ.ಬಾಬು ಮೊದಲಾದವರು ಆಗಮಿಸಿದರು. ಕಾಡುಹಂದಿಯ ಕಳೇಬರವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಯಿತು.
Tags
ಮುಳಿಯಾರು
