ಮಂಗಲ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ 'ಇಕೋ ಸೆನ್ಸ್ ವಿದ್ಯಾರ್ಥಿ ಹರಿತ ಸೇನೆ ಸ್ಕಾಲರ್‌ಶಿಪ್ ಶುಚಿತ್ವೋತ್ಸವ


 ಮಂಗಲ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ 'ಇಕೋ ಸೆನ್ಸ್ ವಿದ್ಯಾರ್ಥಿ ಹರಿತ ಸೇನೆ ಸ್ಕಾಲರ್‌ಶಿಪ್ - ಶುಚಿತ್ರೋತ್ಸವ' ಕಾರ್ಯಕ್ರಮವು ಮಂಗಲ್ಪಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ಯಲ್ಲಿ  ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ರಾದ ಗೋಲ್ಡನ್ ಅಬ್ದುಲ್ ರಹಮಾನ್ ಅವರು ಉದ್ಘಾಟಿಸಿದರು. ಅವರು ಮಾತನಾಡಿ ಇದೊಂದು ಕೇವಲ ಕಾರ್ಯಕ್ರಮ ಎನ್ನುವುದಕ್ಕಿಂತ ಹೆಚ್ಚಾಗಿ, ಪರಿಸರದ ಬಗ್ಗೆ ಹೊಸ ಪೀಳಿಗೆಗೆ ಜವಾಬ್ದಾರಿಯನ್ನು ಕಲಿಸುವ ಅದ್ಭುತ ಪ್ರಯತ್ನವೆಂದರು. ಮಕ್ಕಳೊಂದಿಗೆ ಸಂವಾದ ನಡೆಸಿ, ನಮ್ಮ ಮುಂದಿನ ಪೀಳಿಗೆ ಕೇವಲ ಪ್ರೇಕ್ಷಕರಲ್ಲ, ಬದಲಾಗಿ ಸ್ಪಷ್ಟವಾದ ದೃಷ್ಟಿಕೋನ ಹೊಂದಿರುವವರು ಮತ್ತು ದೊಡ್ಡ ಕನಸುಗಳನ್ನು ಕಾಣುವ ಶಕ್ತಿಯುಳ್ಳವರು.


"ದೇಶದ ಭವಿಷ್ಯ ಈ ಮಕ್ಕಳ ಕೈಯಲ್ಲಿದೆ. ಅವರಿಗೆ ದೊಡ್ಡ ಕನಸುಗಳನ್ನು ಕಾಣಲು ಪ್ರೇರೇಪಿಸುವುದೇ ಇಂತಹ ಕಾರ್ಯಕ್ರಮಗಳ ನಿಜವಾದ ಯಶಸ್ಸು"

 ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾದ ಒಮ್ಮರ್ ಒಪೊಲೊ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಕ್, ಗ್ರಾಮ ಪಂಚಾಯತು ಸದಸ್ಯರು, ಪಂಚಾಯತ್ ಉಪ ಕಾರ್ಯದರ್ಶಿ ಅಂಜು ಉಪಸ್ಥಿತರಿದ್ದು ಶುಭ ಹಾರೈಸಿದರು. ಪಂಚಾಯತ್ ಹೆಲ್ತ್ ಇನ್ನೆ_ಕ್ಟರ್ ರಜನಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಪಂಚಾಯತ್ ನ ಸದಸ್ಯರು, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತದನಂತರ ವಿದ್ಯಾರ್ಥಿಗಳ ಪೇವರ್ ಪ್ರೆಸೆಂಟೇಷನ್, ಕರಕುಶಲ ಪ್ರದರ್ಶನ, ಮೊದಲಾದ ಕಾರ್ಯಕ್ರಮ ನಡೆಯಿತು. ಹರಿತ ಸ್ಕಾಲರ್ ಶಿಪ್ ನ ಪ್ರಶಂಸಾ ಪತ್ರ ವನ್ನು ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರೆಹಮಾನ್ ವಿತರಿಸಿದರು. ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಯೂ ಪಂಚಾಯತ್ ವಿದ್ಯಾಭ್ಯಾಸ ಸಮಿತಿಯ ಕಾರ್ಯದರ್ಶಿ ಯಾದ ಚಿತ್ರಾ ವತಿ ಚಿಗುರುಪಾದೆ. ಸ್ವಾಗತ ನೀ ಡಿದ ಕಾರ್ಯಕ್ರಮಕ್ಕೆ ಶುಚಿತ್ವ ಮಿಷನ್ ನ ಕೋ ಒರ್ಡಿನಟರ್ ಸತ್ಯ ವತಿ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು