ಯೂಟ್ಯೂಬರ್ ಚಿನ್ನಪಾಪು ಆತ್ಮಹತ್ಯೆ; ಪೊಲೀಸರು ವಿಚಾರಣೆ ನಡೆಸಿದ್ದ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ‌ ಪತ್ತೆ


 ಕಾಸರಗೋಡು: ಕೂಡ್ಲು ನಿವಾಸಿ ಯುವಕನ‌ ಮೃತದೇಹ ಮನೆಯ ಮಲಗುವ‌ ಕೋಣೆಯಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ‌ಪತ್ತೆಯಾಗಿದೆ.‌ಕೂಡ್ಲು ಮನ್ನಿಪ್ಪಾಡಿ ಬಳಿಯ ನಿವಾಸಿ ಸಂದೇಶ್ (29) ಮೃತಪಟ್ಟವರು. ಇಂದು (ಆದಿತ್ಯವಾರ) ಮದ್ಯಾಹ್ನ ಮೃತದೇಹ ಕಂಡು ಬಂದಿದೆ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯಳಾಗಿದ್ದ ಚಿನ್ನು ಪಾಪು ಯಾನೆ ರೇಶ್ಮ (25)  ಈ ತಿಂಗಳ 9 ರಂದು ನೇಣು ಬಿಗಿದು ಆತ್ಮಹತ್ಯೆಗೈದಿದ್ದಳು. ಆದೂರು ಆಲಂತ್ತಡ್ಕ ನಿವಾಸಿಯಾದ ಚಿನ್ನುಪಾಪು ಕೂಡ್ಲು ಬಳಿಯ ಬಾಡಿಗೆ ಕ್ವಾಟರ್ಸಿನಲ್ಲಿ ಆತ್ಮಹತ್ಯೆ ಮಾಡಿದ್ದಳು. ಈ ಪ್ರಕರಣದಲ್ಲಿ ಸಂದೇಶನನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದು ಅನಂತರ ಬಿಡುಗಡೆಗೊಳಿಸಲಾಗಿತ್ತು. ಇದರ ನಂತರ ಸಂದೇಶ್ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಪಪ್ರಚಾರ ನಡೆದಿತ್ತೆಂದು ಹೇಳಲಾಗುತ್ತಿದೆ.‌ ಕಾಸರಗೋಡು  ನಗರ ಠಾಣಾ ಪೊಲೀಸರು ಕೇಸು ದಾಖಲಿಸಿದ್ದಾರೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು