ಕಾಪಾ ಕಾಯ್ದೆ ರದ್ದುಗೊಳಿಸಿದ ರಾಜ್ಯ ಹೈಕೋರ್ಟ್, ತಿರುವನಂತಪುರಂ ಬಿಜೆಪಿ ಕೌನ್ಸಿಲರ್ ಆರ್.ಸುಗದನ್ ಗೆ ಜಾಮೀನು


 ತಿರುವನಂತಪುರಂ: ತಿರುವನಂತಪುರಂ ನಗರಸಭೆಯ ಕೌನ್ಸಿಲರ್ ಆರ್. ಸುಗದನ್ ಅವರಿಗೆ ಹೇರಿದ್ದ ಕಾಪಾ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇದರ ಬೆನ್ನಿಗೇ ಸುಗದನ್ ಅವರಿಗೆ ಜಾಮೀನು ನೀಡಲಾಗಿದೆ.‌ಮುಂದಿನ ದಿನಗಳಲ್ಲಿ ಸುಗದನ್ ಅವರು ತಿರುವನಂತಪುರಂ ಕಾರ್ಪೊರೇಶನ್ ಸಭೆಯಲ್ಲಿ ಭಾಗವಹಿಸುವರು.

    ರಾಜಕೀಯ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ಸುಗದನ್ ಅವರ ವಿರುದ್ದ ರಾಜ್ಯ ಸರಕಾರ ಕಾಪಾ ಕಾಯ್ದೆ ಹೇರಿ ಜೈಲಿಗೆ ತಳ್ಳಿತ್ತು. ಇದರ ವಿರುದ್ದ ಸುಗದನ್ ಹಾಗೂ ಬಿಜೆಪಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು