ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಮುಖ್ಯೋಪಾಧ್ಯಾಯನಿ ಶ್ರೀಮತಿ ಶಾಯಿದ ಬೀವಿ ಧ್ವಜಾರೋಹಣಗೈದರು. ಅವರು ಮಾತನಾಡಿ ನನ್ನ ಜೀವನವೇ ನನ್ನ ಸಂದೇಶ, ಸತ್ಯ, ಅಹಿಂಸೆ ಸರಳತೆ, ಸೇವೆ ,ದೇಶಭಕ್ತಿ ಅವರು ಹಾಕಿಕೊಟ್ಟ ಭದ್ರಬುನಾದಿ ಭಾರತ ದೇಶದ ಪ್ರಗತಿಗೆ ಕಾರಣವೆಂದು ಅಭಿಪ್ರಾಯಪಟ್ಟರು.
ವಾರ್ಡು ಜನಪ್ರತಿನಿಧಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಅಶ್ವಿನಿ ಕೆ ಎಂ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಹಮೀದ್ ಕೆಡೆಂಜಿ , ಉಪ ಮುಖ್ಯೋಪಾಧ್ಯಾಯ ಶ್ರೀ ಉಣ್ಣಿಕೃಷ್ಣನ್ ಮೊದಲಾದವರು ಶುಭ ಹಾರೈಸಿದರು.. ಶಾಲಾ ಅಧ್ಯಾಪಕ ವೃಂದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
ಗಾಂಧಿ ಜಯಂತಿ ಕಾರ್ಯಕ್ರಮದ ಸಂಚಾಲಕ ಶ್ರೀ ನಿರಂಜನ್ ರೈ ಪೆರಡಾಲ ಸ್ವಾಗತಿಸಿದರು, ಶ್ರೀ ನಟರಾಜ ರಾಜ್ ಪಟ್ಟಾಜೆ ಧನ್ಯವಾದ ಸಮರ್ಪಿಸಿದರು.. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು..
ಶಾಲಾ ಎಸ್ ಪಿಸಿ ,ಎನ್ ಪಿ ಸಿ ಸ್ಕೌಟ್ ಅಂಡ್ ಗೈಡ್ಸ್, ರೆಡ್ ಕ್ರಾಸ್ ವಿದ್ಯಾರ್ಥಿಗಳು ಶಾಲಾ ಶುಚಿಕರಣ ಯಜ್ಞದಲ್ಲಿ ಪಾಲ್ಗೊಂಡರು..
Tags
ಬದಿಯಡ್ಕ


