ಕೋಳಿ ಅಂಕ ನಡೆಯುತ್ತಿದ್ದ ಕೇಂದ್ರಕ್ಕೆ ಬದಿಯಡ್ಕ ಪೊಲೀಸರ ದಾಳಿ; 6 ಕೋಳಿ, 3250 ರೂ.ಸಹಿತ 3 ಮಂದಿಯ ಸೆರೆ


 ಬದಿಯಡ್ಕ: ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಕೋಳಿ ಅಂಕದಲ್ಲಿ‌ ನಿರತರಾಗಿದ್ದ ಮೂವರನ್ನು 6  ಕೋಳಿಗಳು ಮತ್ತು 3,250 ರೂಪಾಯಿ ನಗದು ಸಮೇತ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಬದಿಯಡ್ಕ ಬಳಿಯ ಮಾಡತ್ತಡ್ಕದ ಪ್ರಮೋದ್ (43), ವಿದ್ಯಾಗಿರಿ ಕಡಾರಿನ ಜಗದೀಶ ಶೆಟ್ಟಿ (58) ಮತ್ತು ನಾರಂಪಾಡಿ ನೆಲ್ಲಿಯಡ್ಕದ ಸುಕೇಶ್ (28) ಬಂಧಿತ ಆರೋಪಿಗಳು.

ನಿನ್ನೆ ಸಂಜೆ ಬದಿಯಡ್ಕ ಪ್ರಿನ್ಸಿಪಾಲ್ ಎಸ್‌ಐ ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಗಸ್ತು ತಿರುಗುತ್ತಿದ್ದ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ಕುಂಬ್ಡಾಜೆ ತಲೆಬೈಲು ಎಂಬಲ್ಲಿ ದಾಳಿ ನಡೆಸಿ ಆರೋಪಗಳನ್ನು ಬಂಧಿಸಲಾಗಿದೆ. ಪೊಲೀಸ್ ತಂಡವನ್ನು ಕಂಡು ಕೆಲವರು ಓಡಿ ಪರಾರಿಯಾಗಿದ್ದಾರೆ.

ಬಂಧಿತರನ್ನು ನಂತರ ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ಪೊಲೀಸ್ ತಂಡದಲ್ಲಿ ಎಎಸ್‌ಐ ಸನೀಶ್ ಸಿರಿಯಕ್, ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಗೋಕುಲ್, ಗಣೇಶ್ ಮತ್ತು ಮನೇಶ್ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು