ಬದಿಯಡ್ಕ: ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿದ ಬದಿಯಡ್ಕ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಜುಜಾಟದ ಸ್ಥಳದಿಂದ 2,800 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಉಕ್ಕಿನಡ್ಕ ಗುತ್ತು ಹೌಸ್‌ನ ಸುಧಾಕರ (52), ಏತಡ್ಕ ಜೀಂತ್ತಡ್ಕದ ಟಿ. ಲೋಕೇಶ್ ಕುಮಾರ್ (32), ಉಕ್ಕಿನಡ್ಕ ಕಂಗಿಲ ಗುತ್ತುವಿನ ಸಂಜು (60), ಪಳ್ಳತಡ್ಕದ ಟಿ. ವಿನೋದ್ (35), ಹಾಗೂ ಏತಡ್ಕ ಅಣ್ಣಪಳ್ಳದ ಗಣೇಶ್ (41) ಬಂಧಿತರಾಗಿದ್ದಾರೆ.
ನಿನ್ನೆ (ಶನಿವಾರ) ಸಂಜೆ 7 ಗಂಟೆಗೆ ಎಸ್‌ಐ ಟಿ. ಸುನೀಲ್ ಕುಮಾರ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಏತಡ್ಕ-ಗಾಳಿ ಗೋಪುರ ರಸ್ತೆ ಬದಿಯ ಜನಸಂಚಾರವಿಲ್ಲದ ಸ್ಥಳದಲ್ಲಿ ಜುಜಾಟದಲ್ಲಿ ತೊಡಗಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Tags
ಬದಿಯಡ್ಕ
