ವಿ.ಡಿ.ಸತೀಶನ್ ಸರಕಾರದ ಆಡಳಿತ ವೈಫಲ್ಯ, ಅರಾಜಕತೆ ಸೃಷ್ಡಿಸಲು ಎಡ-ಬಲ ರಂಗಗಳಿಂದ ಯತ್ನ; ಬಿಜೆಪಿಯ ಪ್ರತಿಭಟನಾ ಮೆರವಣಿಗೆ, ಸಭೆ ಇಂದು


ಕಾಸರಗೋಡು : ವಿ.ಡಿ. ಸತೀಶನ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಎಡ-ಬಲ ರಂಗಗಳು (ಎಲ್‌ಡಿಎಫ್-ಯುಡಿಎಫ್) ನಡೆಸುತ್ತಿರುವ ಪ್ರಯತ್ನದ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿಯ ವತಿಯಿಂದ ಮಾರ್ಚ್ ಹಾಗೂ ಪ್ರತಿಭಟನಾ ಜನಸಭೆಯು ಇಂದು ಕಾಸರಗೋಡು ಪೇಟೆಯಲ್ಲಿ ಜರಗಲಿದೆ.

ಮಧ್ಯಾಹ್ನ 3 ಗಂಟೆಗೆ ಕರಂದಕ್ಕಾಡಿನಿಂದ ಸಾವಿರಾರು ಜನರು ಭಾಗವಹಿಸುವ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ.

ನಂತರ ಕಾಸರಗೋಡು ಹೊಸ ಬಸ್ ನಿಲ್ದಾಣದ ಪರಿಸರದಲ್ಲಿ ನಡೆಯಲಿರುವ ಪ್ರತಿಭಟನಾ ಜನಸಭೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಉದ್ಘಾಟಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು