ಕುಂಬಳೆ: ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ. ಇಚ್ಚಿಲಂಗೋಡು ಕಳತ್ತೂರು ನಿವಾಸಿ ಚನಿಯಪ್ಪ ಪೂಜಾರಿಯವರ ಪತ್ನಿ ಲಕ್ಷ್ಮಿ(69) ಮೃತಪಟ್ಟ ಮಹಿಳೆ.
ಅಗಸ್ಟ್ 14 ರಂದು ಕುಂಬಳೆ ಪೇಟೆಯಲ್ಲಿ ಅತಿವೇಗದಿಂದ ಬಂದ ಕಾರು ಲಕ್ಷ್ಮಿ ಅವರಿಗೆ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮಂಗಳೂರು ಆಸ್ಪತ್ರೆಯಲ್ಲಿ ತಜ್ಞರ ಚಿಕಿತ್ಸೆ ನೀಡಲಾಯಿತು. ಅನಂತರ ಕುಂಬಳೆ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಕುಂಬಳೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
ಮೃತರು ಪತಿ, ಮಕ್ಕಳಾದ ಮಾಲತಿ, ಕೃಷ್ಣ, ಕುಸುಮ, ಇಂದ್ರಾಣಿ, ಮಲ್ಲಿಕ, ಅಳಿಯಂದಿರಾದ ರಾಜು, ನವೀನ್, ಪ್ರವೀಣ್ ಎಂಬಿವರನ್ನು ಅಗಲಿದ್ದಾರೆ.
Tags
ಕುಂಬಳೆ
