ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಾಪಾರಿ ಪೆರಿಯಾರಂ ಆಸ್ಪತ್ರೆಯಲ್ಲಿ ಮೃತ್ಯು



ಕಾಸರಗೋಡು: ಸೀಮೆಎಣ್ಣೆ ಸುರಿದು ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಾಪಾರಿ ಆಸ್ಪತ್ರೆಯಲ್ಲಿ ‌ ಮೃತಪಟ್ಟ ಘಟನೆ ‌ನಡೆದಿದೆ. ಬೋವಿಕಾನ ಮುಂಡಕೈ ನಿವಾಸಿ ಬಾಲಕೃಷ್ಣನ್ (57)  ಮೃತಪಟ್ಟವರು.

ಕಳೆದ ಭಾನುವಾರದಂದು ಇವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಗಾಯಗೊಂಡ ಅವರನ್ನು  ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು.  ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿನ್ನೆ (ಬುಧವಾರ) ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಮನೆಗೆ ತರಲಾಗುವುದು.

ಇವರು ಮುಂಡಕೈ ಮಳಿಕಲ್‌ನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಮೃತರ ಪತ್ನಿ ಸುಶೀಲ, ಮಕ್ಕಳಾದ ಜಿತೇಶ್ (ಆಟೋ ಚಾಲಕ), ಚೈತನ್ಯ (ಜೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್, ಬೇಡಡ್ಕ ಆಸ್ಪತ್ರೆ), ಅಳಿಯ ಭರತನ್ (ಬೆಂಗಳೂರು) ಹಾಗೂ ಸಹೋದರಿ ರಮಣಿ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು