ಬಾಡೂರು ಪದವಿನ ಸತೀಶ (40), ಅಂಗಡಿಮೊಗರು ಅನಾಡಿ ಸೌಸಿನ ಚಂದ್ರನ್ (47), ಕುರುಡಪದವು ಕೊಮ್ಮಂಗಳದ ಗಣೇಶ (38) ಬಂಧಿತರಾಗಿದ್ದಾರೆ. ನಿನ್ನೆ ಸಂಜೆ 6 ಗಂಟೆಯ ಸುಮಾರಿಗೆ ಅಂಗಡಿಮೊಗರು ಜಂಕ್ಷನ್ ಬಳಿ ಖಾಲಿ ಜಾಗದಲ್ಲಿ 20ಕ್ಕೂ ಹೆಚ್ಚು ಜನರು ಸೇರಿ ಕೋಳಿ ಅಂಕ ನಡೆಸುತ್ತಿದ್ದಾರೆ ಎಂದು ಕುಂಬಳೆ ಎಸ್.ಐ. ಅನೂಪ್ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ನಡೆಸಿದ ದಾಳಿಯಲ್ಲಿ ಮೂವರು ಸಿಕ್ಕಿಬಿದ್ದಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಕೆಲವರು ಓಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Tags
ಕುಂಬಳೆ
