ಕಾಸರಗೋಡು: ರೈಲು ಡಿಕ್ಕಿ ಹೊಡೆದು ಮೀನು ಕಾರ್ಮಿಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೇಕಲ ಬಳಿಯ ವೇಲು ಅವರ ಪುತ್ರ ಗೋಪಾಲನ್(62) ಮೃತಪಟ್ಟ ವ್ಯಕ್ತಿ. ಇಂದು (ಮಂಗಳವಾರ) ಇವರ ಮೃತದೇಹ ಬೇಕಲ ಸೇತುವೆ ಬಳಿಯ ರೈಲು ಹಳಿಯಲ್ಲಿ ಪತ್ತೆಯಾಗಿದೆ.
ಮೀನು ಹಿಡಿಯಲೆಂದು ಗೋಪಾಲನ್ ಅವರು ನಿನ್ನೆ ಸಂಜೆ ಸಮುದ್ರದಲ್ಲಿ ಬಲೆ ಕಟ್ಟಿದ್ದರು. ಇಂದು ಬೆಳಗ್ಗೆ ಬಲೆ ತೆಗೆಯಲೆಂದು ಹೋಗಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿರಬೇಕು ಎಂದು ಶಂಕಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿದರು. ಮೃತರು ಪತ್ನಿ ಪುಷ್ಪ ಮಕ್ಕಳಾದ ವಿನೀಶ್, ವಿಶಾಲ್ ಎಂಬಿವರನ್ನು ಅಗಲಿದ್ದಾರೆ.
Tags
ಬೇಕಲ
