ನೀರ್ಚಾಲು ವಲಯದಲ್ಲಿ ಸುವರ್ಣ ಪಾದುಕಾ ಪೂಜೆ


ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಯತಿಗಳ ದಿವ್ಯಸಾನ್ನಿಧ್ಯವನ್ನು ಹೊಂದಿದ ಸುವರ್ಣ ಪಾದುಕೆಗಳ ಸವಾರಿಗೆ ಮುಳ್ಳೇರಿಯ ಮಂಡಲದ ನೀರ್ಚಾಲು ವಲಯದಲ್ಲಿ ಸ್ವಾಗತವನ್ನು ನೀಡಲಾಯಿತು. ಶುಕ್ರವಾರ ಸಂಜೆ ಬೇಳ ಶ್ರೀಧರ ಪ್ರಸಾದರ ಮನೆಯಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ವೇದಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಶನಿವಾರ ಬೆಳಗ್ಗೆ ಹೊಸಮನೆ ಕೃಷ್ಣ ಭಟ್, ಗೋಪಿ ಅಮ್ಮ ನೀರ್ಚಾಲು, ಕೃಷ್ಣಪ್ರವೀಣ ಕೊಳಂಬೆ, ರವೀಂದ್ರನಾಥ ಭಟ್, ಸರಳಿ ಕೃಷ್ಣ ಭಟ್, ಶಂಕರನಾರಾಯಣ ಶರ್ಮ ಶ್ರೀಮಾತಾ ಕಿಳಿಂಗಾರು, ಗೋಪಾಲಕೃಷ್ಣ ಭಟ್ ಮೂಲಡ್ಕ ಅವರ ಮನೆಗಳಲ್ಲಿ ಪಾದುಕಾ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಧ್ಯಾಹ್ನ ಬೇಳ ಶ್ರೀಧರ ಪ್ರಸಾದರ ಮನೆಯಲ್ಲಿ ಗುರುಭಿಕ್ಷಾಸೇವೆ, ಅಷ್ಟಾವಧಾನ ಸೇವೆ, ಮಹಾಪೂಜೆ ನಡೆಯಿತು. ಶ್ರೀಮಠದ ಶಿಷ್ಯಂದಿರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಸಂಜೆ ಕಾಸರಗೋಡು ವಲಯಕ್ಕೆ ಬೀಳ್ಕೊಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು