ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಶಿರಿಯಾ ವಾರ್ಡ್‌ನ ತಿರುಮಲೇಶ್ ಅವರ ಮನೆಗೆ ಬಿಜೆಪಿ ನಾಯಕರು ಭೇಟಿ ‌


ಕುಂಬಳೆ:  ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಮಂಗಲ್ಪಾಡಿ ಪಂಚಾಯತ್‌ ಶಿರಿಯಾ ವಾರ್ಡ್‌ನ ತಿರುಮಲೇಶ್ ಅವರ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್,  ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ ಕಿಶೋರ್ ಕುಮಾರ್, ವಿನು, ಭರತ್ ಸೇರಿದಂತೆ ಪ್ರಮುಖ ನಾಯಕರ ತಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬುಧವಾರ ಮಧ್ಯಾಹ್ನದ ವೇಳೆಗೆ ಹೆಂಚಿನ ಮನೆಯ ಮೇಲ್ಛಾವಣಿಯು ಭಾರಿ ಶಬ್ದದೊಂದಿಗೆ ಕುಸಿದು ಬಿದ್ದಿದೆ. ವಯೋಸಹಜ ಕಾಯಿಲೆಯಿಂದ ದೃಷ್ಟಿ ಕಳೆದುಕೊಂಡಿರುವ ತಾಯಿ ಭಾಗೀರಥಿ, ಪತ್ನಿ ಸುಶ್ಮಿತಾ, ಪುತ್ರಿ ಸಾತ್ವಿಕಾ ಹಾಗೂ ತಿರುಮಲೇಶ್ ಅಪಘಾತದ ಸಮಯದಲ್ಲಿ ಮನೆಯಲ್ಲಿದ್ದರೂ, ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವು ಮತ್ತು ಪರಿಹಾರವನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗುವುದು ಎಂದು ನಾಯಕರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು