ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿ ಬದಿಯಡ್ಕ ಇದರ ಆಶ್ರಯದಲ್ಲಿ ಕೇರಳ ಮರಾಟಿ ಯೂತ್ ಫೆಡರೇಶನ್, ಕೇರಳ ಮರಾಟಿ ಶಾರದೋತ್ಸವ ಮಹಿಳಾ ಸಮಿತಿಯ ಸಹಯೋಗದೊಂದಿಗೆ ಆಟಿಕೂಟ ಜುಲೈ 19 ಆದಿತ್ಯವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಜರಗಲಿರುವುದು. ಪೆರುವಾಯಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕುಞ ನಾಯ್ಕ ಎಂ ಉದ್ಘಾಟಿಸುವರು. ಐತ್ತಪ್ಪ ನಾಯ್ಕ ಅಡ್ಯನಡ್ಕ ಅತಿಥಿಗಳಾಗಿ ಭಾಗವಹಿಸುವರು. ಕೇಶವ ವಿದ್ಯಾನಗರ ಅಧ್ಯಕ್ಷತೆ ವಹಿಸುವರು. ಈಶ್ವರ ಮಾಸ್ತರ್ ಪೆರಡಾಲ, ನಾಗೇಶ್, ಪ್ರಸಾದ್ ಕಿನ್ನಿಮಾಣಿ, ಜಯಪ್ರಭ ಎಂ.ಎಸ್.ಬೋಳುಕಟ್ಟೆ ಮೊದಲಾವರು ಉಪಸ್ಥಿತರಿರುವರು. ಸುಂದರ ನಾಯ್ಕ ಸ್ವಾಗತಿಸಿ ಚಂದ್ರಕಲಾ ಲಕ್ಷ್ಮಣ ವಂದಿಸುವರು. ಕು.ವರ್ಷಾ ಲಕ್ಷ್ಮಣ ನಿರೂಪಿಸುವರು
Tags
ಬದಿಯಡ್ಕ
