ಮಂಜೇಶ್ವರ: ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಆರು ವರ್ಷದ ಬಾಲಕ ನೀರು ಪಾಲಾದ ಘಟನೆ ನಡೆದಿದೆ. ಮೃತನನ್ನು ಕರ್ನಾಟಕ ಮೂಲದ ಫೈಜಾನ್ ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಆರು ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದೆ. ಹೊಸಬೆಟ್ಟುವಿನಲ್ಲಿರುವ ಸಂಬಂಧಿಕರ ಮನೆಗೆ ಫೈಜಾನ್ ಭೇಟಿ ನೀಡಲು ಬಂದಿದ್ದನು. ಇತರ ಮೂವರು ಮಕ್ಕಳೊಂದಿಗೆ ಹೊಸಬೆಟ್ಟು ಸಮುದ್ರ ತೀರದಲ್ಲಿ ಆಟವಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕೂಡಲೇ ಮೂವರನ್ನೂ ದಡಕ್ಕೆ ತಂದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಫೈಜಾನ್ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದರು.
Tags
ಮಂಜೇಶ್ವರ
