ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯ ಪೊಯಿನಾಚ್ಚಿ, ಮಂಡಲಿಪ್ಪಾರದಲ್ಲಿ ಯುವಕನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಇದೊಂದು ಕೊಲೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಚಟ್ಟಂಚಾಲ್ ಮಂಡಲಿಪ್ಪಾರ ನಿವಾಸಿ ಅಬ್ದುಲ್ ರೆಹಮಾನ್ ಎಂಬವರ ಪುತ್ರ ಶಬೀರ್ (40) ಮೃತಪಟ್ಟವರು. ಇಂದು (ಮಂಗಳವಾರ) ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಪೊಯಿನಾಚ್ಚಿ - ಮಂಡಲಿಪ್ಪಾರ ರಸ್ತೆಯ ಜಾಣಿಕಲ್ಲು ಸೇತುವೆಯ ಅಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದಲ್ಲಿ ಕೇವಲ ಶರ್ಟ್ ಮಾತ್ರ ಇತ್ತು. ದೇಹದ ಮೇಲೆ ಗಾಯದ ಗುರುತುಗಳಿದ್ದು, ಇದು ಸಾವಿನ ಬಗ್ಗೆ ಸಂಶಯ ಮೂಡಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹದ ಸಮೀಪ ರಕ್ತದ ಕಲೆಗಳು ಕಂಡುಬಂದಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದಾರೆ.
Tags
ಕಾಸರಗೋಡು
