ಪೆರ್ಲ: ಚುನಾವಣಾ ಪ್ರಚಾರದ ಅಂತಿಮ ದಿನವಾದ ಇಂದು ಪೆರ್ಲ ಪೇಟೆಯಲ್ಲಿ ನಡೆದ ಕೆ. ಸುರೇಂದ್ರನ್ ಮತ್ತು ಕೆ. ಅಣ್ಣಾಮಲೈ ಅವರ ರೋಡ್ ಶೋ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿತು. ವಾದ್ಯಘೋಷಗಳು ಮತ್ತು ಮುತ್ತಿನ ಕೊಡೆಗಳೊಂದಿಗೆ ನೂರಾರು ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 10:30ಕ್ಕೆ ಪೆರ್ಲ ಚೆಕ್ ಪೋಸ್ಟ್‌ನಿಂದ ಆರಂಭವಾದ ರೋಡ್ ಶೋ ಮಧ್ಯಾಹ್ನ ಪೇಟೆಯಲ್ಲಿ ಮುಕ್ತಾಯಗೊಂಡಿತು.
ಅಭಿವೃದ್ಧಿಯೇ ಬಿಜೆಪಿಯ ಏಕೈಕ ಘೋಷಣೆ:-ಕೆ. ಅಣ್ಣಾಮಲೈ
ರೋಡ್ ಶೋ ಉದ್ದೇಶಿಸಿ ಮಾತನಾಡಿದ ಕೆ. ಅಣ್ಣಾಮಲೈ ಅವರು ಈ ಕೆಳಗಿನ ಪ್ರಮುಖ ಅಂಶಗಳನ್ನು ಹಂಚಿಕೊಂಡರು
ಅಭಿವೃದ್ಧಿ ಮಂತ್ರ: ಅಭಿವೃದ್ಧಿ, ಅಭಿವೃದ್ಧಿ ಮತ್ತು ಅಭಿವೃದ್ಧಿ ಮಾತ್ರ ಬಿಜೆಪಿಯ ಏಕೈಕ ಧ್ಯೇಯವಾಗಿದೆ.
ಸುರೇಂದ್ರನ್ ಅನಿವಾರ್ಯತೆ ಕೆ. ಸುರೇಂದ್ರನ್ ಅವರು ವಿಧಾನಸಭೆಯಲ್ಲಿ ಇಲ್ಲದಿದ್ದರೆ ಅದು ಕೇರಳಕ್ಕೆ ದೊಡ್ಡ ನಷ್ಟ. ಮಂಜೇಶ್ವರದ ಸಮಗ್ರ ಅಭಿವೃದ್ಧಿ ಸುರೇಂದ್ರನ್ ಅವರಿಂದ ಮಾತ್ರ ಸಾಧ್ಯ ಎಂದರು.
ಗೆಲುವಿಗಾಗಿ ನನ್ನ ಸ್ಪರ್ಧೆ: ಕೆ. ಸುರೇಂದ್ರನ್
ಎನ್.ಡಿ.ಎ ಅಭ್ಯರ್ಥಿ ಕೆ. ಸುರೇಂದ್ರನ್ ಮಾತನಾಡಿ, "ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಮಂಜೇಶ್ವರದಲ್ಲಿ ಗೆಲುವು ಸಾಧಿಸಲೆಂದೇ. ಗೆದ್ದ ನಂತರ ಕ್ಷೇತ್ರದ ಸರ್ವತೋಮುಖ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ," ಎಂದು ಭರವಸೆ ನೀಡಿದರು.
Tags
ಪೆರ್ಲ
