ಕಾಸರಗೋಡು: ಯುವಕನ ಮೃತದೇಹ ಲಿಫ್ಟ್ ನಿರ್ಮಿಸಲು ತೋಡಿರುವ ಹೊಂಡದಲ್ಲಿ ಪತ್ತೆಯಾಗಿದೆ. ಮೃತದೇಹದಲ್ಲಿ ಗಾಯಗಳಿದ್ದು ಒಳ ಉಡುಪು ಮಾತ್ರ ಧರಿಸಲಾಗಿದೆ. ಇದೊಂದು ಕೊಲೆಯೆಂಬ ಶಂಕೆ ಬಲವಾಗಿದೆ.
ನುಳ್ಳಿಪ್ಪಾಡಿ ಫರ್ಣಿಚರ್ ಅಂಗಡಿಯ ಬಳಿಯಲ್ಲಿ ನಿನ್ನೆ (ಮಂಗಳವಾರ) ರಾತ್ರಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಬಳಿ ಮಂಜುನಾಥ ಬೆಂಗಳೂರು ಎಂಬ ಹೆಸರಿನ ಆಧಾರ್ ಕಾರ್ಡ್ ಸಹ ಲಭಿಸಿದೆ. ಯಾರೋ ಕೊಲೆಗೈದು ಮೃತದೇಹವನ್ನು ಹೊಂಡದಲ್ಲಿ ಹಾಕಿರಬಹುದೆಂದು ಶಂಕಿಸಲಾಗಿದೆ. ಕಾಸರಗೋಡು ನಗರ ಠಾಣಾ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
Tags
ಕಾಸರಗೋಡು
