ಕನ್ನಡ ಮಾಧ್ಯಮ ಅಧ್ಯಾಪಕರಿಗೆ 2025-26 ನೇ ಸಾಲಿನ ವಿದಾಯಕೂಟ ಸಮಾರಂಭ


 ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 2025-26ನೇ ಸಾಲಿನಲ್ಲಿ ನಿವೃತ್ತಿ ಹೊಂದುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ ಶಿಕ್ಷಕಿಯರಿಗೆ ವಿದಾಯ ಕೂಟ ಸಮಾರಂಭ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು. 

      ಕಾರ್ಯಕ್ರಮವನ್ನು ಕಾಸರಗೋಡು ಸರಕಾರಿ ಕಾಲೇಜು ನಿವೃತ್ತ ಕನ್ನಡ ಪ್ರಾಧ್ಯಾಪಿಕೆ ಯು ಮಹೇಶ್ವರಿ  ಉದ್ಘಾಟಿಸಿ " ನಮ್ಮ ಹಿರಿಯರು ಕನ್ನಡವನ್ನು ಉಳಿಸಿ ಬೆಳೆಸಲು ತುಂಬಾ ಪ್ರಯತ್ನಪಟ್ಟಿದ್ದಾರೆ ಅವರ ಶ್ರಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ನಾವು ಕೂಡಾ ಹಿರಿಯರು ಮಾಡಿದ ಸಾಧನೆ ಕೆಲಸಗಳನ್ನು ಮಾಡಬೇಕು. ಕನ್ನಡಕ್ಕಾಗಿ ಹೋರಾಡಿದಂತಹ ಮಹನೀಯರನ್ನು ನಾವು ಮರೆಯಬಾರದು, ಅವರ ಹೋರಾಟದ ಆ ಫಲವನ್ನು ನಾವು ಇಂದು ನಮ್ಮ ಮಣ್ಣಿನ ಭಾಷೆಯನ್ನು ಉಳಿಸಲು ಪ್ರಯತ್ನ ಮಾಡಬೇಕು " ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುಕೇಶ ಎ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಸಾಹಿತಿ, ಪತ್ರಕರ್ತರಾದ ರಾಧಾಕೃಷ್ಣ ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿದ್ದರು. ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಸವಿತಾ ಪುಂಡೂರು, ಕಾಸರಗೋಡು ಡಿ. ಪಿ. ಒ ಆಗಸ್ಟಿನ್ ಬರ್ನಾಡ್ ಮೊಂತೆರೊ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಯಂ, ನಿವೃತ್ತ ವಿದ್ಯಾಧಿಕಾರಿಗಳಾದ ಪುಂಡರೀಕಾಕ್ಷ ಆಚಾರ್ಯ, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಪ್ರಭಾವತಿ ಕೆದಿಲಾಯ ಉಪಸ್ಥಿತರಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ವಕ್ತಾರರಾದ ಸುಕೇಶ್ ಎ ಪ್ರಾಸ್ತಾವಿಕ ಮಾತನಾಡಿದರು.

         2025-26 ನೇ ಸಾಲಿನಲ್ಲಿ ನಿವೃತ್ತಿ ಹೊಂದುವ ಕನ್ನಡ ಮಾಧ್ಯಮದ ಶಿಕ್ಷಕ ಶಿಕ್ಷಕಿಯರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. 

       ಕಾರ್ಯಕ್ರಮದಲ್ಲಿ ಅಧ್ಯಾಪಕ ಸಂಘದ ವಿವಿಧ ಹುದ್ದೆಗಳನ್ನಲಂಕರಿಸಿದ್ದ ಮಾಜಿ‌ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.

ಸೇವೆಯಿಂದ ನಿವೃತ್ತಿ ಹೊಂದುವವರ ಪರಿಚಯವನ್ನು ಕಾಸರಗೋಡು , ಬೇಕಲ ಹೊಸ ದುರ್ಗ ಉಪಜಿಲ್ಲೆಯ ಸುರೇಖಾ ,ವನಿತಾ, ವಿನೀತಾ,ಪೂರ್ಣಿಮಾ, ನಿರೀಕ್ಷಾ,ವಿಜಯ ಕುಮಾರಿ, ರೋಹಿತಾಕ್ಷಿ, ಕವಿತ,ವಿದ್ಯಾ, 

ಕುಂಬಳೆ ಉಪಜಿಲ್ಲೆಯ ಅಂಕಿತ ಎಂ ,ಸೌಮ್ಯ ಕುಮಾರಿ,ವನಜ ಸಿ ಹೆಚ್,ಶ್ಯಾಮಲಾ ಕುಮಾರಿ,ಮಹಾಗಣಪತಿ,ಜ್ಯೋತ್ಸ್ನಾ ,ತಿರುಮಲೇಶ್,ಶಶಿಧರ ಕೆ,ವೀಕ್ಷಿತ ಕೆ , ಕಮಲಾಕ್ಷ ನಾಯಕ್ 

ಮಂಜೇಶ್ವರ ಉಪಜಿಲ್ಲೆಯ

 ಪ್ರಶಾಂತ ಹೊಳ್ಳ ,ರೇಖಾ,ಹರೀಶ್ ಕುಮಾರ್ ,ದೀಪಿಕಾ ಕೆ ,ಜಯಪ್ರಶಾಂತ್ ಪಾಲೆಂಗ್ರಿ,ನೀತಾ,ಹರಿಣಾಕ್ಷಿ,ಶಂಕರನಾರಾಯಣ ಭಟ್

ಮಮತ,ಜಯರಾಮ ಸಿ ಯಚ್ ,ಸ್ಮಿತಾ ಬಿ ,ಗಣೇಶ್,ಸುನಿಲ್ ಕುಮಾರ್ ಯಂ , ಕವಿತಾ ಕೂಡ್ಲು,ಪ್ರದೀಪ್,ಅಶೋಕ್ ಕುಮಾರ್ ಕೊಡ್ಲಮೊಗರು ,ಚಂದ್ರಿಕ,ಭವ್ಯ,ಉಮೇಶ್ ಬಾಯಾರ್ಮೊ   ಮೊದಲಾದವರು ಪರಿಚಯ ಮಾಡಿದರು.

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧಿಕೃತ ವಕ್ತಾರರಾದ ಬಾಬು ಕೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ಶರತ್ ಕುಮಾರ್ ಯಂ ವಂದಿಸಿದರು.ಸಂಘಟನಾ ಕಾರ್ಯದರ್ಶಿ ಜಬ್ಬಾರ್, ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ,  ಉಪಾಧ್ಯಕ್ಷೆ ಶ್ರೀಲತಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಂಘಟನೆಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು