ಬದಿಯಡ್ಕ: ಹೆರಿಗೆಯ ವೇಳೆ ಅಮಿತ ರಕ್ತಸ್ರಾವ ಉಂಟಾಗಿ ಯುವತಿ ಮೃತಪಟ್ಟ ಘಟನೆ ನಡೆದಿದೆ. ಸಹಕಾರಿ ಇಲಾಖೆಯ ಜೂನಿಯರ್ ಆಡಿಟರ್, ಮಾವಿನಕಟ್ಟೆ ನಿವಾಸಿ ಟಿ.ನಳಿನಾಕ್ಷಿ(42) ಮೃತಪಟ್ಟವರು. ಪೆಬ್ರವರಿ 24 ರಂದು ನಳಿನಾಕ್ಷಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅನಂತರ ರಕ್ತಸ್ರಾವ ಉಂಟಾಗಿದ್ದು ಮೂರ್ಛಾವಸ್ಥೆಯುಂಟಾಯಿತು. ಶನಿವಾರ ಅವರು ಕೊನೆಯುಸಿರೆಳೆದರು. ರಕ್ತಸ್ರಾವದಿಂದಾಗಿ ಹೃದಯಾಘಾತ ಉಂಟಾಗಿದ್ದು ಇದರಿಂದಾಗಿ ಮೃತಪಟ್ಟರೆಂದು ಶಂಕಿಸಲಾಗಿದೆ.
ಇದು ನಳಿನಾಕ್ಷಿ ಅವರ ಮೂರನೇ ಹೆರಿಗೆಯಾಗಿದೆ. ಮೃತರು ಪತಿ ರಾಘವನ್, ಮಕ್ಕಳಾದ ದ್ಯಾನ್ ದೀಪ್, ಲಿಶಿತ್ ಹಾಗೂ ಇತರ ಬಂಧು ಮಿತ್ರರನ್ನು ಅಗಲಿದ್ದಾರೆ.
Tags
ಬದಿಯಡ್ಕ
