ಕೊಲ್ಲಂಗಾನ ಬಳಿ ಕಾರು ಡಿಕ್ಕಿ ಹೊಡೆದು ಬಾಲಕ ಮೃತ್ಯು


 ಬದಿಯಡ್ಕ: ಕಾರು ಡಿಕ್ಕಿ ಹೊಡೆದು ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕೊಲ್ಲಂಗಾನ ಬಳಿಯ ಸಿದ್ದಿಕ್-ಸಂಶೀನ ದಂಪತಿಯ ಪುತ್ರ ಅಹಮ್ಮದ್ ಸಾಕಿರ್ (8) ಮೃತಪಟ್ಟ ಬಾಲಕ. ಇಂದು (ಶನಿವಾರ) ಬೆಳಗ್ಗೆ 11 ಗಂಟೆಯ ವೇಳೆ  ಕೊಲ್ಲಂಗಾನ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ   ಗಂಭೀರ ಗಾಯಗೊಂಡ ಬಾಲಕನನ್ನು ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು. ಮೃತ‌ ಬಾಲಕ ಬೇಳ, ಕಿಳಿಂಗಾರು ಬಡ್ಸ್ ಸ್ಕೂಲ್ ವಿದ್ಯಾರ್ಥಿಯಾಗಿದ್ದಾನೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು