ಆರ್. ಎಸ್. ಎಸ್ ಹಿರಿಯ ಕಾರ್ಯಕರ್ತ ಶಿರಿಯ‌ ವಾನಂದೆ‌ ಆನಂದ ಶೆಟ್ಟಿ ನಿಧನ


ಕುಂಬಳೆ:  ಆರ್. ಎಸ್. ಎಸ್ ಹಿರಿಯ ಕಾರ್ಯಕರ್ತ ಶಿರಿಯ‌ ವಾನಂದೆ‌ ಆನಂದ ಶೆಟ್ಟಿ (81) ನಿಧನರಾದರು. ಇವರು ಕುಂಬಳೆಯ ಅಕ್ಷತಾ ಫೈನಾನ್ಸ್ ಮಾಲಕ, ಬಿಜೆಪಿ ನೇತಾರ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿಯವರ ಸಹೋದರರಾಗಿದ್ದಾರೆ. ವಯೋಸಹಜ ಅಸೌಖ್ಯದಿಂದ ಅವರು ಚಿಕಿತ್ಸೆಯಲ್ಲಿದ್ದರು

 ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ವಿವಿದ‌ ಜವಾಬ್ದಾರಿ ವಹಿಸಿದ್ದ ಅವರು   , ಸೀರೆ ಶಂಕರನಾರಾಯಣ ದೇವಸ್ಥಾನ ಸಮಿತಿ ಅಧ್ಯಕ್ಷ ಸಹಿತ ವಿವಿದ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಪ್ರಗತಿಪರ ಕೃಷಿಕನಾಗಿದ್ದ ಅವರನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಮಾದರಿ ಕೃಷಿಕನೆಂದು ಗೌರವಿಸಲಾಗಿತ್ತು. ಮೃತರು ಪತ್ನಿ ಗುಲಾಬಿ, ಮಗ ಮನೋಜ್ ಕುಮಾರ್ ಶೆಟ್ಟಿ, ಸೊಸೆ ಪ್ರೊ. ಭವ್ಯ, ಸಹೋದರ, ಸಹೋದರಿಯರಾದ ಶೀಲಾವತಿ ಶೆಟ್ಟಿ, ಪುಷ್ಪಾವತಿ ಶೆಟ್ಟಿ, ರತ್ನಾವತಿ ಶೆಟ್ಟಿ, ಪ್ರೇಮಲತಾ ಶೆಟ್ಟಿ, ಯಶೋದಶೆಟ್ಟಿ, ದಿ. ಜಯರಾಜ ಶೆಟ್ಟಿ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು