ನೆಲ್ಲಿಕಟ್ಟೆಯಲ್ಲಿ ಕಾರು- ಬಸ್ಸು ಡಿಕ್ಕಿ ಹೊಡೆದು ಓರ್ವ ಮೃತ್ಯು, ಓರ್ವನಿಗೆ ಗಂಭೀರ ಗಾಯ



 ಬದಿಯಡ್ಕ: ನೆಲ್ಲಿಕಟ್ಟೆಯಲ್ಲಿ ಕರ್ಣಾಟಕ ಸಾರಿಗೆ ಬಸ್ಸು ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಓರ್ವ‌ ಮೃತಪಟ್ಟ ದಾರುಣ ಘಟನೆ ನಡೆದಿದೆ. ನೆಲ್ಲಿಕಟ್ಟೆ ನಿವಾಸಿ ಶಂಶುದ್ದೀನ್ ಪೈಕ (68) ಮೃತಪಟ್ಟ ವ್ಯಕ್ತಿ. ಇವರ ಪುತ್ರ ಸಲ್ಮಾನ್ ಹಾರಿಸ್ (22) ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಚೆರ್ಕಳ ಬಳಿಯ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಶನಿವಾರ) ಬೆಳಗ್ಗೆ 6  ಗಂಟೆಗೆ  ಈ ಘಟನೆ ನಡೆದಿದೆ

 ಕಾಸರಗೋಡಿನಂದ ಪುತ್ತೂರಿಗೆ ಸಾಗುತ್ತಿದ್ದ ಕರ್ಣಾಟಕ ಸಾರಿಗೆ ಬಸ್ಸು ಹಾಗೂ ನೆಲ್ಲಿಕಟ್ಟೆಯಿಂದ ಕಾಸರಗೋಡು ರೈಲು ನಿಲ್ದಾಣದತ್ತ ಸಾಗುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು