ಬೇಳ, ಕುಮಾರಮಂಗಲ ನಿವಾಸಿ ಹೃದಯಾಘಾತದಿಂದ ಮೃತ್ಯು


 ನೀರ್ಚಾಲು: ಬೇಳ ನಿವಾಸಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಬೇಳ ಕುಮಾರಮಂಗಲ ನಿವಾಸಿ ಶಿವರಾಮ ಮಣಿಯಾಣಿ(48) ಮೃತಪಟ್ಟವರು. ಇವರು ಕೂಲ್ ಡ್ರಿಂಕ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ನಿನ್ನೆ (ಶನಿವಾರ) ಬೆಳಗ್ಗೆ ಇವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲು ಸಿದ್ದತೆ ನಡೆಸುತ್ತಿದ್ದಂತೆಯೇ ಕೊನೆಯುಸಿರೆಳೆದರು. ದಿವಂಗತ ಚೋಯಿ‌ಮಣಿಯಾಣಿಯವರ ಪುತ್ರರಾದ ಅವರು ತಾಯಿ ಲೀಲಾವತಿ, ಪತ್ನಿ ನಳಿನಾಕ್ಷಿ, ಮಕ್ಕಳಾದ ಶಿವಾನಿ, ಶಾಮಿನಿ, ಸಹೋದರ ಸಹೋದರಿಯರಾದ ಸುನಂದ, ನಳಿನಾಕ್ಷಿ, ರಾಜೇಶ್ ಎಂಬಿಬ್ಬರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು